clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
[an error occurred while processing this directive]
ಮುಖಪುಟ » ಚುಲ್ಟಾರಿ.ಕಾಂ » ಪೂರ್ಣಪಾಠ
ಕಾವಲುಗಾರ ಮಾರ(ದೃಶ್ಯ -2)
ದಕ್ಷಿಣ ಕ್ಯಾಲಿಫೋರ್ನಿಯಾದ ಅರಳುಮಲ್ಲಿಗೆ ಗುಂಪಿನ ಮಕ್ಕಳು ಅಭಿನಯಿಸಿದ ಈ ನಾಟಕದ ಮೊದಲನೇ ದೃಶ್ಯ ನೋಡಿ ಏನನ್ನಿಸಿತು? ಬನ್ನಿ ಮುಂದೇನಾಯ್ತೋ ನೋಡೋಣ.ಗೌಡ : ಹೋಗಿ ಹುಡುಗರೆ, ನಿಮ್ಮ ಕೆಲಸ ಮಾಡಿಕೊ ಹೋಗಿ. ರಾಚ, ನೀನು ಯಾಕೆ ಆಕಾಶ ನೋಡ್ತ ಇದ್ದೀಯ? ಏಯ್‌ು ನೀನು, ಹಾಳು ಹರಟೆ ಹೊಡೆದರೆ ನಿನ್ನನ್ನು ನೀರಿಗೆ ತಳ್ಳಿ ಬಿಡ್ತೀನಿ. ಏಯ್‌ು ಕುಳ್ಳ ನಿನಗೆ ನಗೋದು ಬಿಟ್ಟು ಬೇರೆ ಕೆಲಸ ಇದೆಯ? ರಾಜ ಬರುವುದರ ಒಳಗೆ, ರಸ್ತೆ ಸರಿಯಾಗಬೇಕು. ಯಾಕೆ ನಗುತ್ತಿದ್ದೀರ? ಹೇಳಿ!

ಕೆಲಸಗಾರ-1 : ಮಾರ!

ಗೌಡ : ಅಹ್‌! ಮಾರ! ಇಲ್ಲಿ ಬಂದನೆ?

ಕೆಲಸಗಾರ-2 : ಹೌದು. ದಣಿ. ಅವನು ಆ ಬಂಡೆ ಹಿಂದಿನಿಂದ ನಮ್ಮನ್ನು ನೋಡುತ್ತಿದ್ದ. ನೀವು ಕರೆದಾಗ ಅವನು ಓಡಿ ಹೋದ.

ಗೌಡ : ಎಲ್ಲಿ ಇದ್ದಾನೆ? ಎಲ್ಲಿ ಹೋದ?

ಕೆಲಸಗಾರ-3 : ಇಲ್ಲಿಂದ ಚಂಗನೆ ಹಾರಿ ಬೆಟ್ಟದ ಮೇಲೆ ಓಡಿ ಹೋದ!

ಗೌಡ : ಎಲ್ಲಾ ಕೆಲಸ ನಿಲ್ಲಿಸಿ. ನಿಮ್ಮ ಸಾಮಾನುಗಳನ್ನು ಕೆಳಗೆ ಇಡಿ. ಆ ಕಳ್ಳನನ್ನು ಹಿಡಿದು ತನ್ನಿ. ಹೋಗಿ ಬೇಗ!

ಭೀಮ : ಗೌಡರೆ, ಇಲ್ಲಿ ಇದ್ದಾನೆ ...

ಗೌಡ : ಮಾರ, ನಮ್ಮಿಂದ ದೂರ ಇರು ಎಂದು ನಿನಗೆ ಹೇಳಿರಲಿಲ್ಲವೆ?

ಮಾರ : ಹೌದು ಒಡೆಯ!

ಗೌಡ : ಮತ್ತೆ ಯಾಕೆ ನನ್ನ ಕೆಲಸಗಾರರಿಗೆ ತೊಂದರೆ ಕೊಟ್ಟೆ?

ಮಾರ : ನಾನು ತೊಂದರೆ ಕೊಡಲಿಲ್ಲ! ನನ್ನ ಕೆಲಸದ ಮೆಲೆ ನಾನು ಬಂದಿದ್ದೇನೆ. ಅವರ ಕೆಲಸ ಅವರು ಮಾಡಿಕೊಳ್ಳಲಿ!

ಗೌಡ : ಏನೊ ನಿನ್ನ ಕೆಲಸ! ಮೂರ್ಖ! ನೀ ಒಬ್ಬ ಹುಚ್ಚ! ತಿಳಿದುಕೊ! ಈಗ ಹೊರಡು!

ಮಾರ : ಯಾಕೆ?

ಗೌಡ : ಕೇಳ ಬೇಡ. ರಾಜ ಈ ರಸ್ತೆಯಲ್ಲಿ ಬರುತ್ತಾನೆ. ನಮ್ಮ ಹಳ್ಳಿಯಲ್ಲಿ ನಿನ್ನಂತಹ ಹುಚ್ಚರು ಇದ್ದಾರೆ ಎಂದು ಅವನಿಗೆ ತಿಳಿಯುವುದು ಬೇಕಿಲ್ಲ.

ಮಾರ : ನಾನು ಹುಚ್ಚ ಎಂದು ನನಗೆ ಅನಿಸುವುದಿಲ್ಲವಲ್ಲ!

ಗೌಡ : ಮಾರ, ನನ್ನ ಮಾತು ಕೇಳು. ರಾಜ ಈ ದಾರಿಯಲ್ಲಿ ಬಂದು ಹೋಗಲಿ! ಇನ್ನು ಎರಡು ದಿನ ಇಲ್ಲಿಂದ ದೂರ ಇರು!

ಮಾರ : ಇರದಿದ್ದರೆ?

ಗೌಡ : ಇಲ್ಲದಿದ್ದರೆ ನಿನ್ನನ್ನು ಕೋಣೆಯಲ್ಲಿ ಕಟ್ಟಿ ಹಾಕುತ್ತೇನೆ!

ಮಾರ : ಅಲ್ಲಿ ಕೂತು ನಾನು ದೇವರನ್ನು ಧ್ಯಾನಿಸುತ್ತೇನೆ. ಆ ದೇವರೆ ನನ್ನನ್ನು ಹೊರಗೆ ಬಿಡಿಸುವನು.

ಗೌಡ : ಸರಿ. ನನ್ನಿಂದ ಮರೆಯಾಗು. ಜನರೆ, ಸುಮ್ಮನೆ ನಿಂತು ನೋಡದೆ ನಿಮ್ಮ ಕೆಲಸ ಮಾಡಿ ಹೋಗಿ

ಮಾರ : ಆ ದೇವತೆ ನನ್ನ ಕನಸಿನಲ್ಲಿ ಬಂದು, ""ರಾಜ ಇತ್ತ ಕಡೆ ಬರುತ್ತಾನೆ. ಅವನಿಗೆ ಕೊಳದ ಬಗ್ಗೆ ತಿಳಿಸು. ಅವನು ನನ್ನ ಮಾತು ಕೇಳುತ್ತಾನೆ"" ಎಂದಳು.

ಗೌಡ : ನೀನು ಮತ್ತು ನಿನ್ನ ಹುಚ್ಚು ಕನಸು. ನನಗೆ ನಿನ್ನನ್ನು ಚೆನ್ನಾಗಿ ಒದೆಯಬೇಕು ಅನಿಸುತ್ತದೆ.

ಮಾರ : ಹಾಗೆ ಅನಿಸಲು ನಾನು ಏನು ಮಾಡಿದೆ ಸ್ವಾಮಿ? ಆ ದೇವತೆ ನಿಮ್ಮ ಕನಸಿನಲ್ಲಿ ಬರದೆ ನನ್ನ ಕನಸಿನಲ್ಲಿ ಬಂದಿದ್ದಕೆ ಹೊಟ್ಟೆ ಕಿಚ್ಚೆ? ಅವಳು ಹೆಳಿದ್ದನ್ನೆಲ್ಲ ಮತ್ತೆ ಹೇಳಲೆ?

ಗೌಡ : ಬೇಡಪ್ಪ ಬೇಡ, ಹೊರಡು! ರಾಜ ಬಂದು ಹೋಗುವವರೆಗೆ ಒಳ್ಳೆಯವನಾಗಿ ನಿನ್ನ ಮನೆಯಲ್ಲೆ ಇರು. ನಾನು ನಿನಗೆ ಬಹುಮಾನ ಕೊಡುತ್ತೇನೆ.

ಮಾರ : ಈಗಾಗಲೆ ಮತ್ತೊಬ್ಬ ನನಗೆ ಅತ್ಯುತ್ತಮ ಬಹುಮಾನ ಕೊಟ್ಟಿದ್ದಾನೆ!

ಗೌಡ : ಓಹೊ, ಯಾರು ಅವನು?

ಮಾರ : ನನ್ನ ಮಾವ!

(ಕೆಲಸಗಾರರು ನಗುತ್ತಾರೆ)

ಗೌಡ : (ಸಿಟ್ಟಿನಿಂದ) ಎಲ್ಲರೂ ನಗುವುದನ್ನು ನಿಲ್ಲಿಸಿ. ಇನ್ನೊಮ್ಮೆ ಈ ಹುಚ್ಚನ ಆಟಕ್ಕೆ ನಕ್ಕರೆ ನಿಮ್ಮನ್ನೆಲ್ಲ ಕೆಲಸದಿಂದ ತೆಗೆದು ಹಾಕುತ್ತೇನೆ. ಬಾಯಿ ಮುಚ್ಚಿರಿ... ಭೀಮ,ಇಲ್ಲಿ ಬಾ.

ಭೀಮ : ಇಗೊ, ಬಂದೆ ಒಡೆಯ.

ಗೌಡ : ಇವನ ಕೈ ಕಾಲುಗಳನ್ನು ಕಟ್ಟಿ ಆ ಹಳೆ ದೇಗುಲದ ಕೋಣೆಯಲ್ಲಿ ಎರಡು ದಿನ ಬಿಡು. ಅರ್ಥ ಆಯಿತೆ?

‰ಭೀಮ : ಅಯಿತು, ಒಡೆಯ.

ಗೌಡ : ಮಾರ, ಈ ಭೀಮನನ್ನು ನೋಡು. ತನ್ನ ಬಲದಿಂದ ಇವನು ಆನೆಯನ್ನೆ ತಿರುಗಿಸಬಲ್ಲ. ಜಾಗ್ರತೆ! ಏನಾದರು ತೊಂದರೆ ಕೊಟ್ಟರೆ ಇವನು ತನ್ನ ಬೆರಳಿನಿಂದ ನಿನ್ನನ್ನು ಹಿಚುಕಿ ಹಾಕುತ್ತಾನೆ.

ಮಾರ : ನೀನು ಹೇಗೆ ಇಷ್ಟು ಗಟ್ಟಿಗ ಆದೆ?

ಭೀಮ : ಸಣ್ಣವನಾಗಿದ್ದಾಗ ನನ್ನ ಅಮ್ಮ ಕೊಟ್ಟ ಔಷಧ ಕುಡಿದು, ಬೆಟ್ಟ ಹತ್ತಿ ವ್ಯಾಯಾಮ ಮಾಡಿದೆ.

ಗೌಡ : ಇಲ್ಲಿ ಕೇಳು! ಅವನ ಪ್ರಶ್ನೆಗೆ ನೀನು ಉತ್ತರಿಸಬೇಕಾಗಿಲ್ಲ.

ಮಾರ : ಏಕೆ ಉತ್ತರಿಸಬಾರದು? ನಾನೂ ಅವನ ತರಹ ಔಷಧ ಕುಡಿದು, ಕಸರತ್ತು ಮಾಡಿ, ಬಲಶಾಲಿಯಾಗುತ್ತೇನೆ. ಆಗ ನೀನು ನನ್ನನ್ನು ಹುಚ್ಚ ಎಂದು ಕರೆಯುವುದಿಲ್ಲವೋ ಏನು?

ಗೌಡ : ಹುಚ್ಚಪ್ಪ, ನೀನು ಸಣ್ಣವನಾಗಿದ್ದಾಗ ಆ ಔಷಧ ಕುಡಿಯಬೇಕಾಗಿತ್ತು.

ಗೌಡ : ಭೀಮ, ಈ ಮಾರ ನಿನ್ನ ಸೆರೆಯಾಳು. ‰ಅವನ ಜೊತೆ ಮಾತಾಡಬೇಡ.

ಭೀಮ : ಸರಿ, ನಾನು ಜಾಗ್ರತೆಯಾಗೆ ಇರುವೆ. ‰

ಗೌಡ : ಮಾರ, ನೀನು ಭೀಮನಿಗೆ ತೊಂದರೆ ಕೊಡಬೇಡ.

ಮಾರ : ಇಲ್ಲ,ಇಲ್ಲ, ನಾನು ತೊಂದರೆ ಕೊಡುವುದಿಲ್ಲ. ಭೀಮ, ನಾನು ನನ್ನ ಕನಸಿನ ಕತೆಯನ್ನು ನಿನಗೆ ಹೇಳುತ್ತೇನೆ.

ಗೌಡ : ಭೀಮ, ಅವನ ಕಥೆ ಕೇಳಿ ಮೋಸ ಹೋಗಬೇಡ. ಅವನ ಕೈಗಳನ್ನು ಕಟ್ಟಿ ದರ ದರನೆ ಎಳೆದು ಕೊಂಡು ಹೋಗು.

ದೃಶ್ಯ 1ದೃಶ್ಯ 3
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India