clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
[an error occurred while processing this directive]
ಮುಖಪುಟ » ಚುಲ್ಟಾರಿ.ಕಾಂ » ಪೂರ್ಣಪಾಠ
ಕಾವಲುಗಾರ ಮಾರ(ದೃಶ್ಯ -3)
ದಕ್ಷಿಣ ಕ್ಯಾಲಿಫೋರ್ನಿಯಾದ ಅರಳುಮಲ್ಲಿಗೆ ಗುಂಪಿನ ಮಕ್ಕಳು ಅಭಿನಯಿಸಿದ ಈ ನಾಟಕದ ಎರಡನೇ ದೃಶ್ಯ ನೋಡಿ ಏನನ್ನಿಸಿತು? ಬನ್ನಿ ಮುಂದೇನಾಯ್ತೋ ನೋಡೋಣ. ನಿಮ್ಮ ಚಪ್ಪಾಳೆ ಇನ್ನಷ್ಟು ಬರಲಿ...ಹಿಂದಿನಿಂದ : ರಾಜಾಧಿ ರಾಜ! ರಾಜರು ಬರುತ್ತಿದ್ದಾರೆ ದಾರಿ ದಾರಿ. ರಾಜರು ಬರುತ್ತಿದ್ದಾರೆ ದಾರಿ ದಾರಿ.

ರಾಜ : ನಿಶ್ಶಬ್ದವಾಗಿರಿ! ಯಾರು ಈತ.

ಭೀಮ : ರಾಜ! ಇವನು...

ರಾಜ : ನಾವು ಇವನ ಮಾತು ಮಾತ್ರ ಕೇಳಿಸಿಕೊಳ್ಳುತ್ತೇವೆ.

ಗೌಡ : ರಾಜ, ಅವನೊಬ್ಬ ಅಯೋಗ್ಯ ಮನುಷ್ಯ, ನಿಮ್ಮ ಗಮನಕ್ಕೆ ಅವನು ಅರ್ಹನಲ್ಲ.

ರಾಜ : ಅವನು ಮುಂದೆ ಬರಲಿ. ಯಾರು ನೀನು? ಎಲ್ಲಿಂದ ಬಂದಿದ್ದೀಯ?

ಮಾರ : ಪ್ರಭುಗಳೆ, ನಾನು ಒಬ್ಬ ಸಾಮಾನ್ಯ ಮನುಷ್ಯ. ನನ್ನ ಅಪರಾಧವನ್ನು ಮನ್ನಿಸಿ. ಆದರೆ ನಾನು ಒಂದು ದೊಡ್ಡ ವಿಷಯ ನಿಮಗೆ ಹೇಳಬೇಕು. ನಾನು ಹೇಳಿದ ಮೇಲೆ, ಬೇಕಾದರೆ, ನಿಮ್ಮ ಆನೆಯಿಂದ ನನ್ನನ್ನು ತುಳಿಸಿರಿ.

ರಾಜ : ಇಷ್ಟೊತ್ತು ಎಲ್ಲಿ ಇದ್ದಿ?

ಮಾರ : ಪ್ರಭುಗಳೆ, ಇವತ್ತು ಬೆಳಿಗ್ಗೆಯಿಂದ ಆ ಮರದ ಮೇಲೆ ಇದ್ದೆ. ಇಂದು ನೀವು ಈ ರಾಜ ಮಾರ್ಗದಲ್ಲಿ ಬರುತ್ತೀರಿ ಎಂದು ನನಗೆ ಗೊತ್ತಿತ್ತು.

ರಾಜ : ನಮಗಾಗಿ ಮರದ ಮೆಲೆ ಕಾಯುತ್ತಿದ್ದೆಯ!

ಮಾರ : ಹೌದು ಪ್ರಭು.

ರಾಜ : ನೇರವಾಗಿ ಬಂದು ನಮ್ಮನ್ನು ಕಾಣಬಹುದಿತ್ತಲ್ಲ.

ಮಾರ : ಈ ಗೌಡರು ಮತ್ತು ಅವರ ಕೆಲಸಗಾರರು ಕೂಡಿ ನನ್ನನ್ನು ಕೊಟಡಿಯಲ್ಲಿ ಕಟ್ಟಿ ಹಾಕಿದ್ದರು. ಆದರೆ ಕಾವಲುಗಾರ ಒಳ್ಳೆ ಅವನು. ನನ್ನ ಕನಸಿನ ಕತೆ ಕೇಳಿ ಹೊರಗೆ ಬಿಟ್ಟ.

ರಾಜ : ಏನು ನಿನ್ನ ಕನಸು?

ಮಾರ : ಕೇಳಿ ಸ್ವಾಮಿ..ನೀವು ನಿಂತಿರುವ ಜಾಗ ಪವಿತ್ರ ಜಾಗ. ಲಕ್ಷ್ಮಣನು ಯುದ್ಧದಲ್ಲಿ ಮೂರ್ಛೆ ಹೋದಾಗ ಸಂಜೀವಿನಿ ಹುಡುಕಲು ಬಂದ.

ಗೌಡ : ಹೌದು ಹೌದು. ಅವನು ಇಲ್ಲೆ ನಿಂತದ್ದು. ಇಲ್ಲೆ ಅವನಿಗೆ ಸಂಜೀವಿನಿ ಸಿಕ್ಕಿದ್ದು. ಅದರೊಂದಿಗೆ ಇಲ್ಲಿಂದಲೆ ಲಂಕೆಗೆ ಹಾರಿದ.

ಮಾರ : ಹೌದು. ಆ ಸಂಜೀವಿನಿ ವಾಸನೆಯಿಂದಲೆ ಯಮ ದೂತರು ಓಡಿ ಹೋದರು. ಲಕ್ಷ್ಮಣನು ಪುನಃ ಜೀವಂತಗೊಂಡು ಎದ್ದು ನಿಂತನು. ಇದೆ ಸಂಜೀವಿನಿಯ ಶಕ್ತಿ.

ಗೌಡ : ಸಾಕು ಸುಮ್ಮನಿರು, ಕತೆ ಕಟ್ಟಿ ಹೇಳಬೇಡ. ರಾಜರೆ, ಇವನೊಬ್ಬ ಹುಚ್ಚ.

ರಾಜ : ಮುಂದುವರೆಸು.

ಮಾರ : ಸಂಜೀವಿನಿ ಬೆಳೆದ ಜಾಗದಲ್ಲಿ ಹುಟ್ಟಿದ ನೀರಿನ ಚಿಲುಮೆ ಕೇಳಗೆ ಹರಿದು ನಿಮ್ಮ ಪಾದಗಳನ್ನು ತೊಳೆಯುತ್ತಿದೆ. ಇದೆ ವೇದಾ ನದಿ. ಈ ನೀರಿನಿಂದ ಈ ಪ್ರಭುವಿನ ಜನಗಳ ಜೀವನ.

ರಾಜ : ಈ ನದಿ ವರ್ಷ ಪೂರ್ತಿ ಹರಿಯುವುದೆ?

ಮಾರ : ಪ್ರಭುಗಳೆ, ಆ ವಿಷಯಕ್ಕೆ ಬರುತ್ತಿದ್ದೇನೆ. ಸೃಷ್ಟಿ ದೇವಿಯ ಮಗಳಾಗಿ ಬೆಟ್ಟದ ಮೇಲೆ ಹುಟ್ಟಿ ವಿವಿಧ ಹೂವು ಮತ್ತು ಮೂಲಿಕೆಗಳ ಜಾಗಗಳಲ್ಲಿ ಹರಿದು ನಮ್ಮ ಹಳ್ಳಿಗೆ ಬಂದಿದ್ದಾಳೆ.

ರಾಜ : ಮುಂದೇನು? ಅದಕ್ಕೆ ನಾವು ಏನು ಮಾಡಬೇಕು?

ಮಾರ : ನಿಮಗೆ ದೇವಿಯ ಆಜ್ಞೆಯನ್ನು ಮಾತ್ರ ಹೇಳುತ್ತೇನೆ. ಒಂದು ದಿನ ನಾನು ಗುಡಿಸಲಿನಲ್ಲಿ ಮಲಗಿದ್ದಾಗ... ?ಕಣ್ಣು ಮುಚ್ಚಿ ಕೈಮುಗಿಯುತ್ತಾನೆ?

ದೇವಿ : (ಪ್ರತ್ಯಕ್ಷಳಾಗಿ) ಮಾರ! ಕೇಳಿಸಿಕೊ!

ಮಾರ : ದೇವಿ...

ದೇವಿ : ಈ ವೇದಾ ನದಿ ನನ್ನ ಒಂದು ಪ್ರೀತಿಯ ಆಟಿಗೆ. ಬೇಸಿಗೆಯ ಬಿಸಿಲಲ್ಲಿ ನಾನು ಅವಳನ್ನು ಗಿಡದ ನೆರಳಿನಿಂದ ಕಾಪಾಡುತ್ತೇನೆ. ಅವಳು ನನ್ನ ಎದೆಯ ಅಮೃತ ಹೊತ್ತು ದೇವರನ್ನು ಹಾಗು ಮನುಷ್ಯರನ್ನು ಬದುಕಿಸುತ್ತಾಳೆ. ಬೇಸಿಗೆ ಮುಗಿದ ಮೇಲೆ ನೀವು ನೀರನ್ನು ನಿಮಗೆ ಎಷ್ಟು ಬೇಕೋ ಅಷ್ಟು ಉಪಯೊಗಿಸಿ ಮಿಕ್ಕಿದ್ದನ್ನು ಹರಿದು ಹೋಗಲು ಬಿಡುತ್ತೀರಿ. ನಾನು ಅಜ್ಞೆ ಮಾಡುತ್ತೇನೆ ನೀನು ಹೋಗಿ ನಿನ್ನ ರಾಜನಿಗೆ ಹೇಳು. ಒಂದು ಗೋಡೆಯನ್ನು ಕಟ್ಟಿ ನನ್ನ ಮೆಚ್ಚಿನ ವೇದಾಳನ್ನು ಹಳ್ಳಿಯಿಂದ ಹೋಗಲು ಬಿಡಬೇಡಿ. ಅವಳಿಗೆ ಒಂದು ಮನೆಯನ್ನು ಕಟ್ಟಬೇಕು.

(ಮರೆಯಾಗುತ್ತಾಳೆ)

ಮಾರ : ಪ್ರಭುಗಳೆ, ಈಗ ನನ್ನನ್ನು ಆನೆಯಿಂದ ತುಳಿಸಿರಿ.

ರಾಜ : ಆ ಮಾತು ಬಹು ದೂರ. ದೇವಿಯ ಇಚ್ಛೆಯಂತೆ ನೀನು ಮಹತ್ವದ ವಿಷಯ ತಿಳಿಸಿದ್ದೀಯ. ನೀನು ನಮ್ಮನ್ನು ನಾಳೆ ಅರಮನೆಯಲ್ಲಿ ಭೇಟಿಯಾಗು.

ದೃಶ್ಯ 2ದೃಶ್ಯ 4 ಮತ್ತು 5
ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India