ದಕ್ಷಿಣ ಕ್ಯಾಲಿಫೋರ್ನಿಯಾದ ಅರಳುಮಲ್ಲಿಗೆ ಗುಂಪಿನ ಮಕ್ಕಳು ಅಭಿನಯಿಸಿದ ಈ ನಾಟಕದ ಅಂತಿಮ ಭಾಗ. ಮಕ್ಕಳಿಗೆ ಭರ್ಜರಿ ಚಪ್ಪಾಳೆ.ಹಿರಿಯ ಮಾರ : ನಾನು ಈ ಕೊಳದ ಕಾವಲುಗಾರ. ರಾಜರು ಅದನ್ನು ನನಗೆ ಒಪ್ಪಿಸಿದ್ದಾರೆ. ದೇವಿ ನನ್ನ ಕನಸಿನಲ್ಲಿ ಬಂದು ಆಜ್ಞೆ ಮಾಡಿದ್ದಳು. ಅದರಿಂದಲೆ ಈ ವೇದಾ ನದಿಗೆ ಒಂದು ಮನೆ ಸಿಕ್ಕಿತು. ಈ ಕೊಳದಿಂದಲೆ ನಮ್ಮ ಹಳ್ಳಿಗಳ ಜನರು ಜೀವಿಸುತ್ತಿದ್ದಾರೆ. ಇದೇನು ಇಷ್ಟು ಮೋಡಗಳು...
ವೇದಾ ನದಿ ಜೊರಾಗಿ ಹರಿಯುತ್ತಿದೆ. ... ಇವತ್ತು ರಾತ್ರಿ ನಾನು ಗಮನ ಕೊಡಬೆಕು.
(ಬಿರುಗಾಳಿ, ಮಳೆ, ಸಿಡಿಲು, ಗುಡುಗುಗಳ ಶಬ್ದ)
ದೃಶ್ಯ - 5 ಧ್ವನಿ : ರಾಜ, ರಾಜ, ಅರಸರೆ....(ಟಕ್, ಟಕ್)
ರಾಜ : ಈ ಹೊತ್ತಿನಲ್ಲಿ ಯಾರು ನನ್ನನು ಕರೆಯುತ್ತಿದ್ದಾರೆ. ಇಂತಹ ರಾತ್ರಿಯಲ್ಲಿ ಯಾರು ಬಂದಿದ್ದಾರೆ... ಒಳಗೆ ಬಾ.
ಮಾರ : ನಮಸ್ಕಾರ ಸ್ವಾಮಿ.

ರಾಜ : ಯಾರಪ್ಪ ನೀನು, ಈ ಭಯಂಕರ ರಾತ್ರಿಯಲ್ಲಿ ಇಲ್ಲಿ. ಏನು ಆಯಿತು.
ಮಾರ : ನಾನು ಮಾರ ಸ್ವಾಮಿ. ಕೊಳದ ಕಾವಲುಗಾರ.
ರಾಜ : ಆಹ ಮಾರ!!! ಗುರುತು ಸಿಗಲೆ ಇಲ್ಲ.
ಮಾರ : ಈ ಹೊತ್ತಿನಲ್ಲಿ ಬಂದಿದ್ದಕ್ಕೆ ಕ್ಷಮೆ ಇರಲಿ. ಈ ಮಳೆ ಗಾಳಿಯಲ್ಲಿ ಓಡುತ್ತ ಬಂದಿದ್ದೆನೆ. ನಾನು ಒಂದು ಭಯಾನಕ ಸುದ್ದಿ ತಂದಿದ್ದೇನೆ, ಪ್ರಭುಗಳೆ.
ರಾಜ : ಹೇಳು ಮಾರ.
ಮಾರ : ಕೊಳ...
ರಾಜ : ಯಾಕೆ ಕೊಳ ತುಂಬಿ ಹರಿಯುತ್ತಿದೆಯೆ?
ಮಾರ : ಹಾಗೇನಿಲ್ಲ ಸ್ವಾಮಿ.
ರಾಜ : ಮತ್ತೆ ಏನು ಆಗಿದೆ?
ಮಾರ : ಪ್ರಭುಗಳೆ ಸಂಜೆಯ ತನಕ ಚೆನ್ನಾಗಿ ಇತ್ತು. ರಾತ್ರಿ ಆದ ಕೂಡಲೆ ಆಕಾಶದಲ್ಲಿ ಮೊಡಗಳು ತುಂಬಿದವು. ಜೋರಾಗಿ ಮಳೆ ಬಿತ್ತು. ನಡು ರಾತ್ರಿ ಗಾಳಿ ನನ್ನ ಮನೆಯನ್ನು ನಡುಗಿಸಿತು. ಎದ್ದು ಹೊರಗ ಹೋದೆ.
ರಾಜ : ಮುಂದೆ ಏನು ಆಯಿತು?
ಮಾರ : ವೇದಾ ನದಿ ಗುಡ್ಡದಿಂದ ಜೋರಾಗಿ ಕೆಳಗೆ ಬರುತಿತ್ತು. ಗಾಳಿ ಭೂಮಿಯನ್ನೆ ನಡುಗಿಸುವಂತೆ ಇತ್ತು. ಕೊಳದ ಅಲೆಗಳು ಒಂದು ಆಳಿನ ಎತ್ತರ ಇದ್ದವು.
ರಾಜ : ಮಾರ ಹಾಗಾದರೆ ಕೊಳ ... ನಮಗೆಲ್ಲ ಏನು ಆಗುತ್ತದೆ?
ಮಾರ : ನಾನು ದೇವಿಯನ್ನು ಪ್ರಾರ್ಥಿಸಿದೆ. ?ಕಣ್ಣು ಮುಚ್ಚಿ ಕೈಮುಗಿದು? ದೇವಿ ಕಾಪಾಡು.
ದೇವಿ : ?ಪ್ರತ್ಯಕ್ಷಳಾಗಿ? ಎದ್ದೇಳು ಮಾರ. ಎದ್ದೇಳು. ನನ್ನ ಮಾತುಗಳನ್ನು ಚೆನ್ನಾಗಿ ಕೇಳಿಸಿಕೊ. ನಾನು ಸರೋವರದ ದೇವಿ. ವೇದಾ ನನ್ನ ಆಟಿಗೆ. ನೀನು ಆ ಗುಡಿಸಲು ಖಾಲಿ ಮಾಡು.
ಮಾರ : ದೇವಿ ನಮ್ಮನ್ನು ಕಾಪಾಡು. ನಮ್ಮ ಎಲ್ಲರ ಗತಿ ಏನು?
ದೇವಿ : ನನ್ನ ವೇದಾ ನದಿಯನ್ನು ಹಿಡಿಯಲು ಒಟ್ಟಿದ ಕಲ್ಲುಗಳನ್ನು ಕೆಡವುತ್ತೇನೆ. ಈ ಕೊಳವನ್ನು ನಾಶ ಮಾಡುತ್ತೇನೆ.
ಮಾರ : ದೇವಿ, ನಿನ್ನ ಅಜ್ಞೆಯಂತೆ ನಾವು ಕೊಳ ಕಟ್ಟಿದೆವು.
ದೇವಿ : ಈಗ ಅದು ನನಗೆ ಬೇಕಿಲ್ಲ. ವೇದಾ ನದಿ ಕೊಳಗಳು ನನ್ನ ಆಟಿಗೆಗಳು. ನಾನು ಏನು ಬೇಕಾದರೂ ಮಾಡುತ್ತೇನೆ. ತಡೆಯಲು ನೀವು ಯಾರು?
ಮಾರ : ದೇವಿ, ಈ ಕೊಳದಿಂದ ನಮ್ಮ ರಾಜ್ಯಕ್ಕೆ ಬಹಳ ಉಪಯೋಗ ಆಗಿದೆ. ನೀನು ಅದನ್ನು ನಾಶ ಮಾಡಿದರೆ ನಮ್ಮ ಗತಿ ಏನು.
ದೇವಿ : ನನ್ನನು ತಡೆ ಹಿಡಿಯಲು ನೀನು ಯಾರು?
ಮಾರ : ನಾನು ಒಬ್ಬ ಸಾಧಾರಣ ಮನುಷ್ಯ. ನಿನ್ನನ್ನು ತಡೆ ಹಿಡಿಯಲು ನನ್ನಿಂದ ಸಾಧ್ಯವಿಲ್ಲ. ನನ್ನದು ಒಂದೆ ವಿನಂತಿ. ನಾನು ಓಡಿ ಹೋಗಿ ರಾಜನಿಗೆ ತಿಳಿಸುವೆ. ನಾನು ತಿರುಗಿ ಬರುವವರೆಗು ಏನೂ ಮಾಡಬೇಡ. ತಾಯಿ, ದಯವಿಟ್ಟು ಕರುಣಿಸು.
ದೇವಿ : ನಿನ್ನ ಇಚ್ಛೆಯನ್ನು ಮನ್ನಿಸುವೆ. ರಾಜನಿಗೆ ಹೆಳಿ ಬಾ. ತಥಾಸ್ತು. (ಮರೆಯಾಗುತ್ತಾಳೆ)
ರಾಜ : ಮಾರ ಮಾರ, ಇದೆಲ್ಲ ನಿಜವೆ?
ಮಾರ : ದೇವಿಯ ಅಜ್ಞೆಯಂತೆ ಇಲ್ಲಿ ಓಡಿ ಬಂದಿದ್ದೇನೆ. ನಾನು ಸುಳ್ಳು ಹೇಳಿದ್ದರೆ ನನ್ನ ಮಗ ಮತ್ತು ಹೆಂಡತಿ ಸತ್ತು ಹೋಗಲಿ.
ರಾಜ : ಭಟರೆ, ಎಲ್ಲರಿಗೂ ಹೇಳಿರಿ - ಇದು ಭೂಮಿಯ ಮೇಲೆ ನಮ್ಮ ಕೊನೆ ದಿನ. ಕೂಡಲೆ ಡಂಗುರ ಸಾರಿರಿ.
ಮಾರ : ರಾಜ, ನಾನು ನಿಮ್ಮಲ್ಲಿ ಒಂದು ಮಾತು ಕೇಳಲೆ?
ರಾಜ : ಕೇಳಬಹುದು.
ಮಾರ : ನಾನು ತಿರುಗಿ ಬರುವ ತನಕ ದೇವಿ ಏನೂ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದಾಳೆ.
ನಾನು ಅಲ್ಲಿಗೆ ಹೋಗದಂತೆ ಮಾಡಿರಿ. ನಾನು ಅಲ್ಲಿಗೆ ಎಂದೆಂದೂ ಹೋಗದಂತೆ ಮಾಡಿರಿ. ?ಕತ್ತಿಯನ್ನು ರಾಜನಿಗೆ ಎರಡೂ ಕೈಯಲ್ಲಿ ಎತ್ತಿ ತೋರಿಸುತ್ತ, ತಲೆ ಬಾಗಿ ಕುಳಿತುಕೊಳ್ಳುತ್ತಾನೆ?
(ಮುಗಿಯಿತು)
ದೃಶ್ಯ 3