clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಲೇಖನ-ಸಂದರ್ಶನ
   ನಮ್ಮ ಕರ್ನಾಟಕ
   ಗಾನ ಕೋಗಿಲೆ
   ಕವನ ಸಿಂಚನ
   ಸಣ್ಣ ಕಥೆ
   ಪುಸ್ತಕ ಪ್ರೀತಿ
   ಜನ ಈ ದಿನ
ಮುಖಪುಟ » ಸಾಹಿತ್ಯ-ಸಂಸ್ಕೃತಿ » General » ಪೂರ್ಣಪಾಠ
ಸಾಧನೆಯ ಹಾದಿಯಲ್ಲಿ ಸಂಧ್ಯಾರಾಣಿ

ಭರತನಾಟ್ಯ, ಕೂಚಿಪುಡಿ, ಜನಪದ ನೃತ್ಯ, ಶಾಸ್ತ್ರೀಯ ಸಂಗೀತ, ಸಂಗೀತ ವಾದ್ಯಗಳು, ಲಘು ಸಂಗೀತ, ಕಸೂತಿ, ಚಿತ್ರಕಲೆ, ಕಸದಿಂದ ರಸ, ರಂಗೋಲಿ, ಬಡಗುತಿಟ್ಟು ಯಕ್ಷಗಾನ ಹೀಗೆ ನಾನಾ ಕಲೆಗಳಲ್ಲಿ ಈಕೆ ಸಂಪನ್ನಳು. ಈ ಬಾಲೆಯ ಬದುಕು ಬಂಗಾರವಾಗಲಿ.

‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಮಗು. ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು’ ಎಂದು ನಾರದರು ಧ್ರುವನಿಗೆ ಹೇಳಿದರೆಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಿದೆ. ಯಲ್ಲಾಪುರ ತಾಲ್ಲೂಕಿನ ಉಮ್ಮಚಗಿ ಕಲ್ಲಳ್ಳಿ ಗಿರಣಿ ಮನೆಯ ಸಂಧ್ಯಾರಾಣಿಯಲ್ಲಿನ ಆಸಕ್ತಿ ಮತ್ತು ಪ್ರತಿಭೆ ನೋಡಿದಾಗ, ಈ ಮೇಲಿನ ಮಾತನ್ನು ಈ ಕಾಲದಲ್ಲಿ ನಾರದರು ಇವಳಿಗೆ ಹೇಳಿರಬಹುದೆಂದೆನಿಸುತ್ತದೆ.

ಬಾಲ್ಯದಿಂದಲೇ ತನ್ನ ನೆಚ್ಚಿನ ಭರತನಾಟ್ಯವನ್ನು ಅಭ್ಯಸಿಸತೊಡಗಿದ ಈಕೆಯ ಆಸಕ್ತಿ ಹತ್ತಾರು ದಿಕ್ಕುಗಳಲ್ಲಿ ಹರಿದು, ಎಲ್ಲದರಲ್ಲೂ ಏಕಾಗ್ರತೆಯಿಂದ ಮುನ್ನುಗ್ಗುತ್ತಿದ್ದಾಳೆ.

ಭರತನಾಟ್ಯ, ಕೂಚಿಪುಡಿ, ಜನಪದ ನೃತ್ಯ, ಶಾಸ್ತ್ರೀಯ ಸಂಗೀತ, ಸಂಗೀತ ವಾದ್ಯಗಳು, ಲಘು ಸಂಗೀತ, ಕಸೂತಿ, ಚಿತ್ರಕಲೆ, ಕಸದಿಂದ ರಸ, ರಂಗೋಲಿ, ಬಡಗುತಿಟ್ಟು ಯಕ್ಷಗಾನ ಹೀಗೆ ಮುಂದುವರಿಯುತ್ತಲೇ ಸಾಗುತ್ತವೆ, ಈ ಪ್ರತಿಭೆಯ ನಲ್ಮೆಯ ವಿಷಯಗಳು.

Sandhyaraniಶಾಲೆಯಲ್ಲಿ ಶೇಕಡಾ 90ಕ್ಕೂ ಅಧಿಕ ಅಂಕಗಳನ್ನು ಸಂಪಾದಿಸುವ ಈಕೆ ಶಿಕ್ಷಕ ವೃಂದದ ಅಚ್ಚುಮೆಚ್ಚಿನ ವಿದ್ಯಾರ್ಥಿ. ಪ್ರತಿಭಾ ಕಾರಂಜಿಗಳಲ್ಲಿ ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ಕವಿಗೋಷ್ಠಿ ಹಾಗೂ ಆಟೋಟಗಳಲ್ಲೂ ಜಿಲ್ಲಾ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ.

ತನ್ನ ನೆಚ್ಚಿನ ಕಲೆಗಳ ಸತತ ಅಭ್ಯಾಸದೊಂದಿಗೆ, ಕರಾವಳಿ ಉತ್ಸವ, ಲಕ್ಕುಂಡಿ ಉತ್ಸವಗಳಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನವನ್ನೂ ನೀಡಿದ್ದಾಳೆ. ಮಯೂರ ನೃತ್ಯ, ನಾಗನೃತ್ಯ, ಶಿವಪಾರ್ವತಿ ನೃತ್ಯ, ನಟರಾಜ ನೃತ್ಯ, ಕೂಚಿಪುಡಿಯಲ್ಲಿ ದೀಪನೃತ್ಯ, ದಶಾವತಾರ ನೃತ್ಯ, ಭರತನಾಟ್ಯ ಹಾಗೂ ಬಡಗತಿಟ್ಟು ಯಕ್ಷಗಾನ ನೃತ್ಯಗಳನ್ನು ಹಲವಾರು ಸಾರ್ವಜನಿಕ ವೇದಿಕೆಗಳಲ್ಲಿ ಅಭಿವ್ಯಕ್ತಪಡಿಸುವ ಮೂಲಕ ತನ್ನ ಕಲಾನೈಪುಣ್ಯ ಮೆರೆದಿದ್ದಾಳೆ.

ಬೆಂಗಳೂರಿನ ಮಕ್ಕಳ ಮನೆ ನೀಡುವ ‘ಕಲಾ ಕಣ್ಮಣಿ’ ಪ್ರಶಸ್ತಿಯನ್ನು ಇತ್ತೀಚೆಗೆ ಪಡೆದಿದ್ದಾಳೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್‌ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. 2004-05ರಲ್ಲಿ ಗದಗದ ‘ಕಲಾವಿಕಾಸ ಪರಿಷತ್‌(ರಿ) ಪ್ರಶಸ್ತಿ’, 2005ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಮಕ್ಕಳ ನೃತ್ಯ ಸಂಗೀತ ಸಮ್ಮೇಳನದಲ್ಲಿ ‘ಬಾಲ ನಾಟ್ಯಮಯೂರಿ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ. ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯು ‘ನೃತ್ಯಶ್ರೀ’ ಬಿರುದು ನೀಡಿ ಸನ್ಮಾನಿಸಿದೆ. ಹೀಗೆ ನೃತ್ಯಕ್ಕಾಗಿ ಹಲವಾರು ಪ್ರಶಸ್ತಿ ಪಡೆದಿರುವ ಈಕೆ, ಬಾಲ್ಯದಲ್ಲಿ ನೃತ್ಯಗುರು ಕಂಪ್ಲಿಯ ವಿಜಯಲಕ್ಷ್ಮೀ ಹೆಗಡೆಯವರಲ್ಲಿ ಸಂಗೀತಾಭ್ಯಾಸ ಮಾಡಿದ್ದಾಳೆ. ಸದ್ಯಕ್ಕೆ ಶಿರಸಿಯ ನಾಟ್ಯಾಂಜಲಿ ನೃತ್ಯಶಾಲೆಯಲ್ಲಿ ಸಂಗೀತಾಭ್ಯಾಸ ಮುಂದುವರಿಸಿದ್ದಾಳೆ.

ನೃತ್ಯದ ಜೊತೆಗೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವುದರಿಂದ ದಿನೇಶ ಹೆಗಡೆ ಗಿಳಿಗುಂಡಿ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸವನ್ನೂ ಮುಂದುವರಿಸಿದ್ದಾಳೆ. ಸಂಗೀತ ವಾದ್ಯಗಳಾದ ಹಾರ್ಮೋನಿಯಂ ಹಾಗೂ ತಬಲಾಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವುದರಿಂದ ಅವುಗಳನ್ನೂ ಕಲಿಯುತ್ತಿದ್ದಾಳೆ.

ಕೃಷಿಕರಾದ ತಂದೆ ಸದಾನಂದ ಹೆಗಡೆ, ತಾಯಿ ಜಯಶ್ರೀ ಹೆಗಡೆ ಸಂಧ್ಯಾರಾಣಿಯ ಆಸಕ್ತಿಗಳಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಈ ಕಿರಿಯ ವಯಸ್ಸಿನ ಹಿರಿಯ ಪ್ರತಿಭೆ ಕಲಾ ಲೋಕದಲ್ಲಿ ಹೆಮ್ಮರವಾಗಿ ಬೆಳೆಯಲಿ. ಕನ್ನಡ ಸಂಸ್ಕೃತಿಯ ತೇರೆಳೆಯಲಿ ಎಂಬುದು ನಮ್ಮ ಹಾರೈಕೆ.

Post Your Views


ಮುಖಪುಟ / ಸಾಹಿತ್ಯ-ಸಂಸ್ಕೃತಿ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂದ: Rashmi    ದಿನಾಂಕ: 18 Sep 2008 10:16 pm

Best wishes to sandhya rani

Rashmi Mandya

ಉತ್ತರಿಸಿ |  ನಿಂದನಾ ಸಂದೇಶವಿದ್ದರೆ ವರದಿ ಮಾಡಿ

[ ಅಭಿಪ್ರಾಯ ಬರೆಯಿರಿ ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India