ಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.