| ಗಿರೀಶ್ ಕಾರ್ನಾಡ್ |
 1998 | ಅಪೂರ್ಣತೆಯ ಪರಿಪೂರ್ಣ ಚಿತ್ರಕಾರ |
| ಮನುಷ್ಯನ ಪೂರ್ಣತ್ವದ ಬಗ್ಗೆ ಆರಂಭದಿಂದಲೇ ಒಂದು ರೀತಿಯ ಅನುಮಾನ ಇಟ್ಟುಕೊಂಡೇ ಬಂದವರು ಗಿರೀಶ್ ಕಾರ್ನಾಡ್. ಗೊಂದಲಕ್ಕೆ ಸಿಲುಕಿ ತನ್ನನ್ನೇ ತಾನು ನಿರಾಕರಿಸುವ ಮನುಷ್ಯನ ಚಿತ್ರಣಕ್ಕೆ ಯಯಾತಿಯ ನಾಯಕ, ಹಯವದನದ ದೇವದತ್ತ, ನಾಗಮಂಡಲದ ನಾಯಕ, ತುಘಲಕ್ , ಇನ್ನೇನು ಬೇಕು ಸಾಕ್ಷಿ? |
| ‘ ದಿವ್ಯ ’ ದೃಷ್ಟಿ ಯಿಂದ ಮೋಕ್ಷ |
 1994 | ಭವ ಬಂಧನದ ಯು.ಆರ್.ಅನಂತಮೂರ್ತಿ ! |
| ಎಂಥವರೂ ಪ್ರೀತಿಸಬಹುದಾಗಿದ್ದ ಅನಂತಮೂರ್ತಿ, ಈಗಲೂ ಹಾಗೇ ಇದ್ದಾರೆ. ಮುಂದೆಯೂ ಹಾಗೇ ಇರುತ್ತಾರಾ ! |
| ಅನೇಕ ಪ್ರಥಮಗಳ ಕನ್ನಡಿಗ |
 1990 | ಗೋಕಾಕ್... ಕನ್ನಡದ ಪೀಕಾಕ್ |
| ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದವರು ಎಲ್ಲವೂ ಆಗಿದ್ದು ಎಲ್ಲಿಯೂ ನಿಲ್ಲದಂತಿದ್ದರು |
| ಸಣ್ಣ ಕತೆಯಾದ ದೊಡ್ಡವರು |
 1983 | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
| ಅವರ ಕತೆಗಳಲ್ಲಿ ಜಾಣತನದ ಹೇಳಿಕೆಗಳೇ ಇಲ್ಲ . ಅವು ಅಪ್ಪಟ ಕಲಾಕೃತಿಗಳು ಅಷ್ಟೇ. ಅಲ್ಲಿ ಲೇಖಕ ತಾನು ಕೇಳಿದ ಕತೆಯನ್ನು ನಮಗೆ ದಾಟಿಸಿಬಿಡುತ್ತಾನೆ. ಹಾಗೆ ದಾಟಿಸುವಾಗ ಆ ಕತೆಗೆ ಲೇಖಕನ ಹಮ್ಮಿನ ಲೇಪವಾಗಲೀ, ಬೌದ್ಧಿಕತೆಯ ಪ್ರದರ್ಶನವಾಗಲೀ ಇರುವುದಿಲ್ಲ . ಅದೇ ಅವರ ಶಕ್ತಿ. |
| ಕೋಟ ಶಿವರಾಮ ಕಾರಂತ |
 1978 | ವಾಚಾಮಗೋಚರ ವ್ಯಕ್ತಿತ್ವ... ಅಗೋಚರ ಅಂತಸ್ಸತ್ವ... |
| ಬಹುಶಃ ಅದೇ ಅವರ ಶ್ರೇಷ್ಠತೆಯೂ ಇರಬಹುದು. ತುಂಬ ದೊಡ್ಡ ಲೇಖಕ ಎಲ್ಲವನ್ನೂ ಮೀರುತ್ತಾನೆ ಅನ್ನುವುದಕ್ಕೆ ಸಾಕ್ಷಿ ಕೂಡಾ ಆಗಿರಬಹುದು. |
| ಆ ಹೆಸರೀಗ ಜಾನಪದ |
 1974 | ಸಾಧನ ಕೇರಿಯ ಶ್ರಾವಣ ಪ್ರತಿಭೆ ಬೇಂದ್ರೆ! |
ಬೇಂದ್ರೆ ಜನಮನದ ಕವಿ. ಧಾರವಾಡದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕವಿಯಲ್ಲ , ವರಕವಿ.
|
| ವಿಶ್ವಮಾನವ |
 1968 | ಮಲೆನಾಡಿನ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ |
| ಈ ಹೆಸರೀಗ ಮರೆತ ಮಾತು. ಈ ಮೂರು ಪದಗಳು ಸೇರಿ ಆದ ಕುವೆಂಪು ಮನೆ ಮಾತು. ಕನ್ನಡಕ್ಕೆ ಮೊದಲ ಜ್ಞಾನ ಪೀಠ ತಂದುಕೊಟ್ಟ ಕವಿ ಎಂಬ ಹೆಗ್ಗಳಿಗೆ ಭಾಜನರಾದವರು ಕುವೆಂಪು. |