ಬೆಂಗಳೂರು : ‘ರೆಡ್ ರೋವರ್ ಗೋಸ್ ಟು ಮಾರ್ಸ್ ಟ್ರೆೃನಿಂಗ್ ಮಿಷನ್’ಗೆ ಸೇವೆ ಸಲ್ಲಿಸಲು ಅಮೆರಿಕೆಯ ಪ್ಲಾನೆಟರಿ ಸೊಸೈಟಿ ಆಯ್ಕೆ ಮಾಡಿರುವ 9 ಪುಟ್ಟ ವಿಜ್ಞಾನಿಗಳಲ್ಲಿ ಬೆಂಗಳೂರಿನ 10 ವರ್ಷದ ಪೋರ ವಿಕಾಸ್ ಸಾರಂಗಧರ ಕೂಡ ಒಬ್ಬ. ಅಷ್ಟೇ ಅಲ್ಲ, ಈ ಮಿಷನ್‌ಗೆ ಆಯ್ಕೆಯಾಗಿರುವ 9 ಮಕ್ಕಳ ಪೈಕಿ ಮೂವರು ಭಾರತದ ಮಕ್ಕಳು.
ಸೀನಿಯರ್ ವಿಭಾಗದಲ್ಲಿ ಉದಯಪುರದ 15 ವರ್ಷದ ಶಲೀನ್ ರಾಜೇಂದ್ರ ಹರ್ತಾಲ್ಕ, ಜೂನಿಯರ್ ವಿಭಾಗದಲ್ಲಿ ನಾಗಪುರದ 13 ವರ್ಷದ ತನ್ಮಯ್ ಸಂಜಯ್ ಕಿರ್ವಾಡ್‌ಕರ್ ಆಯ್ಕೆಯಾಗಿದ್ದಾರೆ. ಸಬ್ ಜೂನಿಯರ್ ವಿಭಾಗದಲ್ಲಿ ಬೆಂಗಳೂರಿನ ವಿಕಾಸ್‌ಗೆ ಪುಟ್ಟ ವಿಜ್ಞಾನಿ ಗೌರವ ಸಿಕ್ಕಿದೆ. ಮುಂದಿನ ವರ್ಷದಾದಿಯಲ್ಲಿ ಈ ವಿಜ್ಞಾನಿಗಳು ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೊದಲ್ಲಿನ ಮಾಲಿನ್ ಸ್ಪೇಸ್ ಸೈನ್ಸ್ ಸಿಸ್ಟಂಸ್‌ಗೆ ಹೋಗಿ, ಎಂಜಿಎಸ್ ಮಾರ್ಸ್ ಕಕ್ಷೆ ಕ್ಯಾಮರಾಗಳ ಸಹಾಯದಿಂದ ಮಂಗಳ ಗ್ರಹದ ವಿವಿಧ ಚಿತ್ರಗಳನ್ನು ತೆಗೆದು, ಗ್ರಹದಲ್ಲಿ ಇಳಿಯಬಹುದಾದ ಸ್ಥಳವನ್ನು ಗೊತ್ತುಪಡಿಸಲಿದ್ದಾರೆ.
ಪುಟ್ಟ ವಿಜ್ಞಾನಿಗಳ ಆಯ್ಕೆಗೆ 44 ದೇಶಗಳ 10 ಸಾವಿರ ಮಕ್ಕಳು ಸ್ಪರ್ಧಿಸಿದ್ದರು. ಇದಕ್ಕಾಗಿ ಬರೆದ ಪರೀಕ್ಷೆಯಲ್ಲಿ 16 ರಾಷ್ಟ್ರಗಳ 80 ಮಕ್ಕಳು ಸೆಮಿಫೈನಲ್ಸ್‌ಗೆ ಆಯ್ಕೆಯಾಗಿದ್ದರು. ಅವರ ಪೈಕಿ ಕೊನೆಗೆ ಆರಿಸಲಾದ 9 ಮಕ್ಕಳಲ್ಲಿ ಭಾರತದ ಮೂವರು ಆಯ್ಕೆಯಾದರು. ಉಳಿದಂತೆ ಹಂಗೇರಿಯ ಇಬ್ಬರು, ಅಮೆರಿಕ, ತೈವಾನ್, ಬ್ರೆಜಿಲ್ ಹಾಗೂ ಪೋಲೆಂಡ್‌ನ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಮಂಗಳವಾರ ಇಸ್ರೋ ಹೊರಡಿಸಿರುವ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ.
(ಇನ್ಫೋ ವಾರ್ತೆ)
-ನಾ-ಸಾ-ದ-ತ್ತ ಮುಖ ಮಾಡಿ-ರು-ವ ಬೆಂಗ-ಳೂ-ರಿ-ನ ಅರ-ವಿಂ-ದ- ವಿಕಾ-ಸಮುಖಪುಟ / ಸಾಹಿತ್ಯ ಸೊಗಡು
