ವೈಕುಂಠ ಏಕಾದಶಿಯ ದಿವಸ ನೀವು ಕೈಗೊಳ್ಳುವ ಈ ಪವಿತ್ರ ಉಪವಾಸದಿಂದ ಲಭ್ಯವಾಗುವ ಪುಣ್ಯ ಇನ್ನುಳಿದ 23 ಏಕಾದಶಿ ವ್ರತಾಚರಣೆಗೆ ಸಮ ಎನ್ನುವ ನಂಬಿಕೆಯೂ ಇದೆ. ಹಿನ್ನೆಲೆಗಳು ಇಂತಿರಲು, ನೀವೂ ಸ್ವರ್ಗದ ಅಭಿಲಾಷಿಗಳಾಗಿದ್ದರೆ ಸ್ವರ್ಗದ ಬಾಗಿಲು ತಟ್ಟಲು ಇದು ಪ್ರಶಸ್ತವಾದ ಸಕಾಲ. ವೈಕುಂಠ ಏಕಾದಶಿ ದಿನ ಉಪವಾಸ ವ್ರತ ಆಚರಿಸಿದರೆ ಸತ್ತಮೇಲೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆಂಬ ನಂಬಿಕೆಯಿದೆ.