ಕಾವೇರಿ ಸಂಘದ ಸಹಯೋಗದೊಂದಿಗೆ ಅಮೆರಿಕದ ರಾಜಧಾನಿಯಲ್ಲಿ ಮೇ ಕೊನೆಯ ವಾರದಲ್ಲಿ ನಡೆಯುತ್ತಿರುವ 4ನೇ ವಸಂತ ಸಾಹಿತ್ಯೋತ್ಸವದಲ್ಲಿ ಕನ್ನಡದ ಖ್ಯಾತ ಕಾದಂಬರಿಕಾರ್ತಿಯರಾದ ಡಾ. ವೀಣಾ ಶಾಂತೇಶ್ವರ್ ಮತ್ತು ವೈದೇಹಿಯವರು ಭಾಗವಹಿಸುತ್ತಿದ್ದಾರೆ. ಸಾಹಿತ್ಯೋತ್ಸಾಹಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.
ಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.
ಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ..
ಭಾರತದ ನೇಗಿಲಯೋಗಿಗಳ ಕಳವಳ ಮತ್ತು ಅವರಿಗೆ ಪರಿಹಾರ; ಐಟಿ ಬಿಟಿ ಬಿಪಿಒ ವಲಯ ಹಾಗೂ ಅಲ್ಲಿಂದ ಉದ್ಭವಿಸಿರುವ ಸಾಮಾಜಿಕ ಸಮಸ್ಯೆಗಳು. ಈ ಎರಡು ವಿಚಾರಗಳನ್ನು ಕುರಿತು ಬೆಳಕು ಚೆಲ್ಲುವ, ನಗದು ಬಹುಮಾನ ಪ್ರಬಂಧ ಸ್ಪರ್ಧೆಗೆ ಆಹ್ವಾನ.