clear
clear
clear
clear
clear
  ಸುದ್ದಿಜಾಲ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help  
 ಲೇಖನಗಳು
   ಶಿಕಾಗೊ ಸಮ್ಮೇಳನ
   ಅಲ್ಲಲ್ಲಿ ಏನೇನು...?
   ಅಮೆರಿಕನ್ನಡ ವಿಡಿಯೋ
   ಕವನ ಸಿಂಚನ
   ಕಥನ ಕುತೂಹಲ
   ವಿಶ್ವ ಪರ್ಯಟನ
ಮುಖಪುಟ » ಎನ್ಆರ್ಐ » ಕನವ ಸಿಂಚನ » ಪೂರ್ಣಪಾಠ
ಸಿಂಧು - ಬಿಂದು : ನಮ್ಮ ಮನೆಯ ಬೆಕ್ಕುಗಳು

ಸಿಂಧು - ಬಿಂದು : ನಮ್ಮ ಮನೆಯ ಬೆಕ್ಕುಗಳು
(ನಮ್ಮ ಮನೆಯಲ್ಲಿ ಎರಡು ಬೆಕ್ಕುಗಳನ್ನು ಸಾಕಿದ್ದೇವೆ. ಅವೆರಡೂ ಮುದ್ದಾದ ಬೆಕ್ಕುಗಳು. ಸಿಂಧು ಮತ್ತು ಬಿಂದು ಎಂದು ಅವುಗಳ ಹೆಸರು. ಈ ಬೆಕ್ಕುಗಳೆಂದರೆ ನಮಗೆ, ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬ ಪ್ರೀತಿ. ಬೆಕ್ಕುಗಳು ನಮ್ಮಿಂದ ಪ್ರೀತಿ ಮಾಡಿಸಿಕೊಳ್ಳುತ್ತವೆ. ಹಾಲು ಹಾಕದಿದ್ದರೆ ಮಿಯಾಂವ್‌ ಮಿಯಾಂವ್‌ ಎಂದು ಕೂಗುತ್ತಲೇ ಇರುತ್ತವೆ. ಹಾಗೊಮ್ಮೆ ಅವು ಕೂಗಿದರೆ ನಾವೇನಾದರೂ ಅವಕ್ಕೆ ಕಾಟ ಕೊಟ್ಟೆವೇನೊ ಅಂತ ಅಮ್ಮನಿಗೆ ಕಾಳಜಿ. ಯಾಕೆಂದರೆ ಬೆಕ್ಕುಗಳೆಂದರೆ ಅವಳಿಗೂ ತುಂಬ ಇಷ್ಟ. ಈ ಬೆಕ್ಕುಗಳ ಮೇಲೆ ನಾವು ಒಂದು ಪದ್ಯ ರಚಿಸಿದ್ದೇವೆ. ಇದು ನಮ್ಮಮ್ಮ ಶಾಲೆಯಲ್ಲಿ ಕಲಿತ ಪದ್ಯದಂತೆಯೇ ಇದೆ. ಈ ಪದ್ಯ ರಚಿಸಲು ಅಮ್ಮನೂ ನಮಗೆ ನೆರವಾಗಿದ್ದಾಳೆ. ಈ ಪದ್ಯವನ್ನು ನಾವು ಕಾವೇರಿ ಕನ್ನಡ ಸಂಘದ ಫಂಕ್ಷನ್‌ನಲ್ಲಿ ಹಾಡಿದ್ದೆವು. ಮತ್ತೆ ಅದು ಸಂಘದ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಈಗ ನೀವೂ ಓದಿ.)
Sindhu and Bindu - Two naughty black cats
Anitha with Rashmi and Priya
  • ರಶ್ಮಿ ಮತ್ತು ಪ್ರಿಯಾ ಕುಲಕರ್ಣಿ; ರಾಕ್‌ವಿಲ್‌, ಮೇರಿಲ್ಯಾಂಡ್‌
    anita_avadhani@yahoo.com
ನಮ್ಮ ಮನೆಯಲೆರಡು ಕರಿಯ ಬೆಕ್ಕು ಇರುವುವು
ಎತ್ತಿಕೊಳದೆ ಹೋದರವಕೆ ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ ಮಿಯಾಂವ್‌ಗುಡುವವು
ಮಿಯಾಂವ್‌ಗೊಂಡು ನಮ್ಮ ಮೈಯ ಪರಚಿಬಿಡುವವು
ನಮ್ಮ ಪರಚಿಕೊಂಡು ಬೆಕ್ಕು ಓಡಿ ಹೋಗುವುವು
ಓಡಿ ಹೋಗಿ ಸೋಫಾ ಹಿಂದೆ ಅಡಗಿಕೊಳುವವು
ಬೆಕ್ಕು ಮಿಯಾಂವ್‌ಗುಡಲು ಅಮ್ಮ ಎದ್ದು ಬರುವಳು
ಬಂದು ನಮ್ಮ ಬೆನ್ನಿಗೊಂದು ಗುದ್ದು ಕೊಡುವಳು
ಬೆಕ್ಕುಗಳನು ಎತ್ತಿಕೊಂಡು ಮುದ್ದು ಕೊಡುವಳು
ಅಯ್ಯೋಪಾಪ ಎಂದು ಅವಕೆ ಹಾಲು ಇಡುವಳು
ಕಳ್ಳ ಬೆಕ್ಕು ಆಡಿದ ನಾಟಕ ಸಾರ್ಥಕವಾಯಿತು
ಮಿಯಾಂವ್‌ ಮಿಯಾಂವ್ಗುಡುವುದೆಲ್ಲ ಅರ್ಥವಾಯಿತು!





ಮುಖಪುಟ / ಎನ್‌ಆರ್‌ಐ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
 User Comments
[ Post Comments ]
ಇಂಥದ್ದು ಬೇರೆಲ್ಲೂ ಸಿಗದು
ThatsKannada
ಹೆಚ್ಚಿನ ಲೇಖನಗಳು
ThatsKannada
ThatsKannada
ThatsKannada
ThatsKannada
ಹೆಚ್ಚಿನ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Should Congress open the door to Bangarappa?
He is a big guy, can save cong from the shambles
You can`t trust him, any moment he can pack the bag
He is a spent force, can`t add value to any party
    

Results | Previous Results

Recommended Links
     SMS Updates      Astrology      Chat      RSS      Online Shopping & Auctions      Jobs      Explore India