ಕರ್ನಾಟಕದಲ್ಲಿ ವಿಶೇಷವಾಗಿ ಮೈಸೂರು ಕರ್ನಾಟಕದಲ್ಲಿ ಮಜ್ಜಿಗೆ ಹುಳಿ ವಿಶೇಷ ಸಾಂಬಾರಾಗಿ ಮನೆ ಮಂದಿಯ ನಾಲಿಗೆ ತಣಿಸುತ್ತದೆ. ಮಲ್ನಾಡು, ಕರಾವಳಿಯ ಕಡೆಯಲ್ಲಿ ಕೊಂಚ ಬೇರೆ ವಿಧಾನದಲ್ಲಿ ಮಜ್ಜಿಗೆ ಹುಳಿ ಮಾಡುವುದನ್ನು ಕಾಣಬಹುದಾದರೂ, ಅಸಲೀ ಮೈಸೂರು ಕರ್ನಾಟಕದ ರುಚಿ ಜನಪ್ರಿಯ.ಮಲ್ನಾಡಿನಲ್ಲಿ ಕಾಯಿ ನೀರು ಹೆಚ್ಚಾಗಿ ಬಳಸಿದರೆ, ಮೈಸೂರು ಕಡೆ ಹುಳಿ ಮಜ್ಜಿಗೆ ಬಳಸಲಾಗುತ್ತದೆ.